News & Events

ಗುತ್ತುಮನೆಯಲ್ಲಿ ವಾರಾಂತ್ಯ ಕಾರ್ಯಕ್ರಮ ದಿ: 26-11-2022 

20th year celebration-pilikula biological park

 

Independence Day

Ati Koota


Fruits Mela

INVITATION FRUITS MELA (click here to view more)

 


Invitation - Exhibition (click here to view more)


(click on the image to view more)


On the occasion of March Equinox conducted daytime astronomy activities on 20.03.2022 @ PRSC.


International Women's Day Celebration @ Pilikula Regional Science Center.


ದಿನಾಂಕ 03.03.2022 ಮತ್ತು 04.03.2022 ರಂದು ದ. ಕ. ಜಿಲ್ಲೆಯ ಆಯ್ದ ಪ್ರೌಢ ಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಪಠ್ಯಕ್ರಮ ಸಂಬಂಧಿ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆ.ಎಸ್.ಸಿ.ಎಸ್.ಟಿ.), ಬೆಂಗಳೂರು ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ದ. ಕ. ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.


‘Vigyan Sarvatra Pujyate’

A week-long Science and Technology Festival was planned by ‘Vigyan Prasar’ to celebrate the 75th year of independence, with a focus on science and technology. Lectures, activities and competitions were planned in 75 Centres. In Karnataka, three Centres were chosen. Karnataka Science & Technology Academy, Bengalur, CFTRI, Mysuru and Pilikula Regional Science Centre(PRSC), Mangaluru.
The program at Mangaluru was inaugurated on February 22, 2022 by Dr Uday Kumar R Yaragatti, Director, NITK, Surathkal, in the presence of invited guests. He gave the inaugural address also.The ancient Indian science called Vedic science flourished in several fields like Astronomy, Medical and Mathematics. This tradition of building Indian Science has to be continued, he said. The Deputy Commissioner & Chairman, Pilikula Development Authority also spoke. The Mayor of Mangalore was the President of the function.


Craft Bazzar Programme at Pilikula

 


Festival of Science & Technology

“Vignan Sarvatra Poojyate”

22-28 February 2022

PROGRAM SCHEDULE

Vignan Sarvatra Poojyate Brochure (click here to View)

 


ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಸಚಿವರು, ಅರಣ್ಯ ಕನ್ನಡ ಮತ್ತು ಸಂಸ್ಕ್ರøತಿ ಸಚಿವರು ಕರ್ನಾಟಕ ಸರ್ಕಾರ ಇವರು ದಿನಾಂಕ 09.07.2021 ರಂದು ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿದ ಸಂದರ್ಭ.


ಕೋವಿಡ್ 2019ರ ನಿಯಂತ್ರಣದ ಹಿನ್ನೆಲೆಯಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ಆಕರ್ಷಣೆಗಳನ್ನು ಕಳೆದ ಮೂರು ತಿಂಗಳಿಂದ ಮುಚ್ಚಲಾಗಿದ್ದು ಈಗ ಸರ್ಕಾರದ ಆದೇಶ ಅನುಸರಿಸಿ ಕೋವಿಡ್ 2019ರ ನಿಯಂತ್ರಣ ಮಾರ್ಗಸೂಚಿಯ ಎಲ್ಲಾ ಸೂಚನೆಗಳನ್ನು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ/ ಎಸ್‍ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತುಗೊಳಪಟ್ಟು ದಿ:10-06-2020 ಬುಧವಾರದಿಂದ ಪೂರ್ವಾಹ್ನ 09.30ರಿಂದ ಸಂಜೆ 05.00 ಗಂಟೆವರೆಗೆ ಜೈವಿಕ ಉದ್ಯಾನ, ಲೇಕ್ ಗಾರ್ಡನ್, ಸಂಸ್ಕøತಿ ಗ್ರಾಮ ಮತ್ತು ಗುತ್ತು ಮನೆಯ ಆಕರ್ಷಣೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು. ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯವನ್ನು ಈಗ ತೆರೆಯದೆ ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶವನ್ನು ಅನುಸರಿಸಿ ತೆರೆಯಲಾಗುವುದು. ಪ್ರತೀ ಸೋಮವಾರ ವಾರದ ರಜೆ ಇರುತ್ತದೆ.

ಈ ಸಂಬಂಧ ಕೋವಿಡ್ 2019ರ ನಿಯಂತ್ರಣದ ಹಿನ್ನೆಲೆಯಲ್ಲಿ ಸಂದರ್ಶಕರು ವೀಕ್ಷಣೆಗೆ ಬರುವ ವೇಳೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಿಬ್ಬಂದಿ ವರ್ಗದವರಿಗೆ ಅಗತ್ಯ ತರಬೇತಿಯನ್ನು ನೀಡಲಾಯಿತು.

ಸಾರ್ವಜನಿಕರು ಸಹಕರಿಸಲು ಕೋರಿದೆ.


ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡ ಕಾಮಗಾರಿಗಳ ಪರಿಶೀಲನೆಯನ್ನು ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆಯವರು ದಿ:06-06-2020 ನಡೆಸಿರುತ್ತಾರೆ. ಪರಿಶೀಲನೆ ವೇಳೆ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಶೆಟ್ಟಿ, ಪ್ರಾಧಿಕಾರದ ಕಾರ್ಯದರ್ಶಿಯವರಾದ ಶ್ರೀ ಪ್ರದೀಪ್ ಡಿಸೋಜಾ, ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಮೇಘನಾ ಆರ್, ಪಿಲಿಕುಳ ಜೈವಿಕ ಉದ್ಯಾನವನÀದ ನಿರ್ದೇಶಕರಾದ ಶ್ರೀ ಜಯಪ್ರಕಾಶ್ ಭಂಡಾರಿ, ಪ್ರಾಧಿಕಾರದ ಅಭಿಯಂತರರಾದ ಶ್ರೀ ಚಂದ್ರಕಾಂತ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಪರಿಶೀಲನೆ ವೇಳೆ ಕಾಮಗಾರಿಗಳ ವಿವರಣೆಯನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರರು ವಿವರಿಸಿದರು. ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಸೌಕರ್ಯಕ್ಕಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇವರ ಅನುದಾನದಿಂದ ಖರೀದಿಸಿದ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳ ವಿವರಣೆಯನ್ನು ಕಾರ್ಯನಿರ್ವಾಹಕ ನಿರ್ದೇಶಕರು ನೀಡಿದರು. ಪರಿಶೀಲನೆ ವೇಳೆ ಹಾಜರಿದ್ದ ಜೈವಿಕ ಉದ್ಯಾನವನದ ನಿರ್ದೇಶಕರು ಪಿಲಿಕುಳವು ನಡೆದು ಬಂದ ದಾರಿ ಹಾಗೂ ಈವರೆಗೆ ಕೇಂದ್ರ ಸರಕಾರ, ರಾಜ್ಯ ಸರಕಾರ, ಬ್ಯಾಂಕ್, ಸಂಘ ಸಂಸ್ಥೆಗಳು ಮತ್ತು ಪ್ರವೇಶ ಶುಲ್ಕದಿಂದ ಕೈಗೊಂಡಿರುವ ಅಭಿವೃದ್ಧಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಮಾನ್ಯ ಅಧ್ಯಕ್ಷರು ಪಿಲಿಕುಳದ ಲೇಕ್ ಗಾರ್ಡನ್, ಸಂಸ್ಕøತಿ ಗ್ರಾಮ ಮುಂತಾದ ವಿಭಾಗಗಳಿಗೆ ಬೇಟಿ ನೀಡಿ ಪರಿಶೀಲಿಸಿದರು.


Celebration of World Environment Day - 2020


Women's Day 2020
Visit of Sri ASHOK LAVASE Ji, Hon'ble Election Commissioner of India to Pilikula on 02/01/2020


First Pilikula International Full-Dome Film Festival and Planetarium Conference" held during November 6 - 8, 2019 at Pilikula Regional Science Center, Mangaluru. The three day International Conference was well attended and was appreciated by all the participants. 
ಆಟಿಕೂಟ 2019

ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಸಂಸ್ಕೃತಿಗ್ರಾಮದ ಗುತ್ತುಮನೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ‘ಪಿಲಿಕುಳ ಆಟಿಕೂಟ’ ಕಾರ್ಯಕ್ರಮವನ್ನು ದಿ.04.08.2019 ರಂದು ಪಾರಂಪರಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವದೊಂದಿಗೆ ಆಚರಿಸಲಾಯಿತು.

ಅಂದು ಬೆಳಿಗ್ಗೆ 10 ಗಂಟೆಯಿಂದ ರಾಜ್ಯಪ್ರಶಸ್ತಿ ವಿಜೇತ ಕಲಾವಿದ ಶ್ರೀ ಸೀತಾರಾಮ್ ಕುಮಾರ್ ಕಟೀಲ್ ಇವರ ಸಾರಥ್ಯದಲ್ಲಿ ‘ಯಕ್ಷನೃತ್ಯ ಮತ್ತು ಹಾಸ್ಯ ವೈಭವ’ ಕಾರ್ಯಕ್ರಮವು ವೀಕ್ಷಕರನ್ನು ಹಾಸ್ಯದ ನಗೆಗಡಲಲ್ಲಿ ತೇಲಾಡಿಸಿತು. ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸದಸ್ಯೆಯರಿಂದ ಗುರಿಯಪ್ಪ, ಗೆಂಡದಡ್ಯೆ, ಪೆಲಕಾಯಿದ ಗಟ್ಟಿ, ತೆಕ್ಕರೆದ ಅಡ್ಯೆ, ತಜಂಕ್‍ದ ಅಂಬಡೆ, ಮಂಜಲ್ ಇರೆತ್ತ ಗಟ್ಟಿ, ಗಾರಿಗೆ, ಪತ್ರೊಡೆ, ಅರಿತ ಉಂಡೆ ಮೊದಲಾದ ಆಟಿಯ ವಿಶೇಷ ತಿನಿಸುಗಳ ಪ್ರದರ್ಶನ ಮತ್ತು ವಿತರಣೆ ಕೂಡಾ ಮನಸೂರೆಗೊಂಡಿತು. ಮದ್ಯಾಹ್ನ 1 ಗಂಟೆಯಿಂದ ಆಟಿಯ ವಿಶೇಷ ಭೋಜನವನ್ನು ಏರ್ಪಡಿಸಲಾಗಿದ್ದು ಒಟ್ಟು 25 ಬಗೆಯ ಹಳ್ಳಿ ಸೊಗಡಿನ ಖಾದ್ಯಗಳನ್ನು ಜನರು ಸವಿದರು.

ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೀ ಮಹಮ್ಮದ್ ನಝೀರ್, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಯತೀಶ್ ಬೈಕಂಪಾಡಿ, ವಿಜಯಾ ಬ್ಯಾಂಕ್ (ಈಗ ಬ್ಯಾಂಕ್ ಆಫ್ ಬರೋಡಾ) ಇದರ ಡಿ.ಜಿ.ಎಂ, ಮತ್ತು ಪ್ರಧಾನ ವ್ಯವಸ್ಥಾಪಕರು ಹಾಗೂ ಜೈವಿಕ ಉದ್ಯಾನವನದ ನಿರ್ದೇಶಕರಾದ ಶ್ರೀ ಜಯಪ್ರಕಾಶ್ ಭಂಡಾರಿ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ಕೆ.ವಿ.ರಾವ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.World Environment Day Celebrations - 2019 conducted on 8th of June 2019 at Pilikula Regional Science Center.


Fruits Utsava -2019


RAJA MAJA Summer Camp - 2019Parisara Snehi Deepavali held on 10&11-11-2018 at Pilikula


ಪಿಲಿಕುಳ ಆಟಿಕೂಟ-2018

ಪಿಲಿಕುಳ ನಿಸರ್ಗಧಾಮದ ಗುತ್ತು ಮನೆಯಲ್ಲಿ ವಿಜಯಾ ಬ್ಯಾಂಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮಂಡಲಗಳ ಒಕ್ಕೂಟ, ಮತ್ತು ಕಲ್ಕೂರ ಪ್ರತಿμÁ್ಠನ ಇವರ ಸಹಯೋಗದೊಂದಿಗೆ ಪಿಲಿಕುಳ ಆಟಿಕೂಟ 2018 ವನ್ನು ಸಾಂಪ್ರದಾಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಮಯವಾಗಿ ದಿನಾಂಕ 12-08-2018 ರಂದು ಆಚರಿಸಲಾಯಿತು.

ಪಿಲಿಕುಳ ಆಟಿಕೂಟ-2018ನ್ನು ಸಂಸ್ಕೃತಿ ಗ್ರಾಮ ಉಪಸಮಿತಿ ಅಧ್ಯಕ್ಷರಾದ ಡಾ.ಕೆ.ಚಿನ್ನಪ್ಪಗೌಡ ಉದ್ಘಾಟಿಸಿದರು. ಮುಲ್ಕಿ-ಮೂಡಬಿದ್ರೆ ಶಾಸಕ ಶ್ರೀ ಉಮಾನಾಥ ಕೋಟ್ಯಾನ್, ವಿಜಯಾ ಬ್ಯಾಂಕ್ಡಿ ಜಿಎಂ ಶ್ರೀ ಶ್ರೀಧರ್, ಮಂಗಳೂರು ಮೇಯರ್ ಶ್ರೀ ಭಾಸ್ಕರ್ ಕೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಹರಿಪ್ರಸಾದ್ ಶೆಟ್ಟಿ, ಪಶ್ಚಿಮ ವಲಯ ಐಜಿಪಿ ಶ್ರೀ ಅರುಣ್ ಚಕ್ರವರ್ತಿ, ಮಂಗಳೂರು ನಗರ ಡಿಸಿಪಿ ಹನುಮಂತರಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ, ಪಿಲಿಕುಳ ಆಡಳಿತ ಮಂಡಳಿ ಸದಸ್ಯ ಡಾ.ಎನ್.ಜಿ ಮೋಹನ್, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾ ತೇಜೋಮಯ, ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಪ್ರಸನ್ನ ವಿ, ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ ರಾವ್, ಸಂಸ್ಕೃತಿ ಗ್ರಾಮದ ಯೋಜನಾ ಅಧಿಕಾರಿ ಡಾ.ನಿತಿನ್ ಎನ್.ಕೆ, ಆಡಳಿತಾಧಿಕಾರಿ ಶ್ರೀ ಬಾಬು ದೇವಾಡಿಗ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೈಮ್ ರಾಮದಾಸ್ ಬಳಗದಿಂದ ತುಳು ಜನಪದ ಗೀತೆಗಳ ಗಾಯನ ನಡೆಯಿತು. ತೆಂಕು ತಿಟ್ಟಿನ ಪ್ರಸಿದ್ಧ ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಂದ ಯಕ್ಷಮಂಜೂಷದ ನಿರ್ದೇಶಕಿ ಶ್ರೀಮತಿ ವಿದ್ಯಾ ಕೋಳ್ಯೂರುರವರ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ವೈಭವ ನಡೆಯಿತು.

ನಗರ ಪ್ರದೇಶದಿಂದ ಆಗಮಿಸಿದ 1000ಕ್ಕಿಂತಲೂ ಹೆಚ್ಚಿನ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಧ್ಯಾಹ್ನ 1ಗಂಟೆಯ ನಂತರ ಆಟಿಯ ವಿಶೇಷ 20 ಬಗೆಯ ವಿಶೇಷ ಭೋಜನವನ್ನು ಸವಿದು ಸಂಭ್ರಮಿಸಿದರು.


ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞನರ ಸಂಘ ಮಂಗಳೂರು ಜಂಟಿಯಾಗಿ ಆಯೋಜಿಸಿದ ಖಗ್ರಾಸ ಚಂದ್ರಗ್ರಹಣದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಶತಮಾನದ ಸುಧೀರ್ಘ ಚಂದ್ರಗ್ರಹಣವನ್ನು ಸಾರ್ವಜನಿಕರು ಕುತೂಹಲದಿಂದ ಕಣ್ತುಂಬಿಕೊಂಡರು. ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ 1 ಗಂಟೆಗೆ ಖಗ್ರಾಸ ಗ್ರಹಣವಾಗಿ ಮುಂಜಾನೆ 2.43ಕ್ಕೆ ಮೋಕ್ಷವಾಯಿತು. ಗ್ರಹಣದ ವೀಕ್ಷಣೆಯೊಂದಿಗೆ ಹತ್ತಿರದಲ್ಲಿ ಕಂಗೊಳಿಸುತ್ತಿದ್ದ ಮಂಗಳನ ದರ್ಶನವೂ ವೀಕ್ಷಕರಿಗೆ ಲಭಿಸಿತು.

ದೂರದರ್ಶಕ ಮತ್ತು ದುರ್ಬೀನುಗಳ ಮೂಲಕ ಈ ಅಪೂರ್ವ ವಿದ್ಯಮಾನಗಳ ವಿಕ್ಷಣೆಯ ಸಂಧರ್ಭದಲ್ಲಿ ಮೋಡಗಳ ದೆಸೆಯಿಂದ ಆಗಾಗ ಅಡಚಣೆಯುಂಟಾದರೂ ವೀಕ್ಷಕರು ತಾಳ್ಮೆಯಿಂದ ಈ ಸಮಯದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞ ಡಾ| ಜಯಂತ್ ಅವರು ನೀಡುತ್ತಿದ್ದ ವಿವರಣೆಗಳನ್ನು ಕೇಳಿ ಸಂಶಯಗಳನ್ನು ಪರಿಹರಿಸಿ ಕೊಂಡರು.


 The new ATM Centre opening on 25-7-2018 at Pilikula Main Entrance.

The new ATM Centre opening on 25-7-2018 at Pilikula Main Entrance. Inaugurated by Sri Kumar. KAS., Hon'ble Addl. Deputy Commissioner of D.K. Dist. ಅಳಿವಿನಂಚಿನಲ್ಲಿರುವ ಸಿಹಿನೀರಿನ ಮೀನು ಮರಿಗಳ
ಮೂಲ ಆವಾಸಕ್ಕೆ ಬಿಡುಗಡೆ ಕಾರ್ಯಕ್ರಮ

ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಸಂತಾನೋತ್ಪತ್ತಿ ಮಾಡಿ ಬೆಳೆಸಿದ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಸಿಹಿನೀರಿನ ಮತ್ಸ್ಯಪ್ರಬೇಧಗಳ ಮರಿಗಳನ್ನು ಅವುಗಳ ಮೂಲ ಆವಾಸಕ್ಕೆ ಬಿಡುವ ಕಾರ್ಯಕ್ರವಮವು ಕರ್ನಾಟಕ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ದ.ಕ. ಜಿಲ್ಲಾ ಪಂಚಾಯತ್‍ನ ಸಹಯೋಗದೊಂದಿಗೆ ದಿನಾಂಕ: 28/06/2018ರಂದು ನಾರಾವಿಯಲ್ಲಿರುವ ಅರಣ್ಯ ವಿಶ್ರಾಂತಿ ಗೃಹದಲ್ಲಿ ನಡೆಯಿತು.

ಅಥಿತಿಗಳನ್ನು ಸ್ವಾಗತಿಸಿ ಮಾತನಾಡಿದ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿದೇಶಕರಾದ ಶ್ರೀ ವಿ. ಪ್ರಸನ್ನ ಇವರು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್‍ಗಾರ್ಡನ್‍ನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಸ್ಥಾಪನೆ ಶೀರ್ಷಿಕೆಯಡಿಯಲ್ಲಿ ರೂ. 98.00 ಲಕ್ಷದ ಅನುದಾನದಲ್ಲಿ ಅಕ್ವೇರಿಯಂ ನ್ನು ಸ್ಥಾಪಿಸಿ ಸುಮಾರು 22 ಜಾತಿಯ ಮೀನುಗಳನ್ನು ಸಾಕಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡುವುದರ ಜೊತೆಗೆ ವಿನಾಶದ ಅಂಚಿನಲ್ಲಿರುವ ಕಿಜಾನ್, ಮಲಬಾರ್ ಡೈನೊ, ಚಂದ್ರಡಿಕೆ ಮುಂತಾದ ಇತರೆ ಮೀನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡಿ ಅವುಗಳ ಮರಿಗಳನ್ನು ಪಶ್ಚಿಮ ಘಟ್ಟದ ಮೂಲ ಅವಾಸ ಸ್ಥಾನಕ್ಕೆ ಕೊಂಡೊಯ್ದು ಬಿಡುವುದು ಯೋಜನೆಯ ಮುಖ್ಯ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ಎಂ.ಆರ್. ರವಿ ಇವರು ಮತನಾಡಿ ಪ್ರಕೃತಿಯ ಸಮತೋಲನ ಕಾಪಾಡಲು ಎಲ್ಲಾ ಜೀವಿರಾಶಿಗಳ ಉಳಿವು ಅಗತ್ಯ. ಆದರೆ ಇಂದು ನಾವು ನಮ್ಮ ಸ್ವಾರ್ಥಕ್ಕಾಗಿ ಇತರ ಜೀವರಾಶಿಗಳನ್ನು ನಾಶಮಾಡುತ್ತ ಬಂದಿದ್ದೇವೆ. ಇಂತಹ ಜೀವಿರಾಶಿಗಳ ಸಂರಕ್ಷಣೆಗೆ ಇಲಾಖೆಗಳು ಕೈಜೋಡಿಸಿವೆ. ಪಿಲಿಕುಳ ನಿಸರ್ಗಧಾಮದಿಂದ ಅಳಿವಿನಂಚಿನಲ್ಲಿರುವ ಮೀನು ಪ್ರಭೇದಗಳ ಸಂರಕ್ಷಣಾ ಕೆಲಸ ಆಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಳ್ತಂಗಡಿ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ ಪೂಂಜ ಮಾತನಾಡಿ ಅಳಿವಿನಂಚಿನಲ್ಲಿರುವ ಮತ್ಸ್ಯಪ್ರಭೇದಗಳ ಸಂರಕ್ಷಣೆಗೆ ಮುಂದಾಗಿರುವ ಪಿಲಿಕುಳ ನಿಸರ್ಗಧಾಮದ ಕೆಲಸ ಶ್ಲಾಘನೀಯ, ಪಿಲಿಕುಳದಲ್ಲಿ ಸಂತಾನೋತ್ಪತ್ತಿ ಮಾಡಿದ ಅಳಿವಿನಂಚಿನಲ್ಲಿರುವ ಮೀನುಗಳ ಮರಿಗಳನ್ನು ಅವುಗಳ ಮೂಲ ಆವಾಸಕ್ಕೆ ಬಿಡುಗಡೆ ಮಾಡಲು ಬೆಳ್ತಂಗಡಿ ಕ್ಷೇತ್ರದ ಪ್ರದೇಶಗಳನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಸಂತೋಷ ವ್ಯಕ್ತಪಡಿಸುತ್ತಾ ಇಂತಹ ಅನೇಕ ಸಂರಕ್ಷಣಾ ಕೆಲಸಗಳು ಪಿಲಿಕುಳದಿಂದ ಆಗಲಿ ಎಂದರು.

ನಾರಾವಿ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಪಿ. ಧರಣೇಂದ್ರ ಕುಮಾರ್, ಮಂಗಳೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಸುಶ್ಮಿತಾ, ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಯಶೋಧ, ಸದಸ್ಯ ಶ್ರೀ ಉದಯ ಹೆಗ್ಡೆ, ಕುತ್ಲೂರು ಅರಣ್ಯ ಸಮಿತಿ ಅಧ್ಯಕ್ಷ ಶ್ರೀ ಶ್ರೀಧರ ಪೂಜಾರಿ, ತಾಲೂಕು ಇಲಾಖಾಧಿಕಾರಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು. ವೇಣೂರು ವಲಯ ಅರಣ್ಯಾಧಿಕಾರಿ ಶ್ರೀ ಪ್ರಶಾಂತ ಪೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿರು.

ಸಮಾರಂಭದ ಬಳಿಕ ಮೀನು ಮರಿಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಾರಾವಿ ಪರಿಸರದ ಕುತ್ಲೂರು ನದಿಗೆ ಶಾಸಕರಾದ ಶ್ರೀ ಹರೀಶ ಪೂಂಜರವರು ಮೀನುಮರಿಗಳನ್ನು ಬಿಡುವುದರ ಮೂಲಕ ಮೀನುಮರಿಗಳ ಆವಾಸಕ್ಕೆ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿಲಿಕುಳ ನಿಸರ್ಗಧಾಮದ ಪ್ರಿನ್ಸಿಪಾಲ್ ಸೈಂಟಿಸ್ಟ್ ಡಾ. ಸೂರ್ಯಪ್ರಕಾಶ್ ಶೆಣೈ, ವೈಜ್ಞಾನಿಕ ಅಧಿಕಾರಿ ಶ್ರೀ ರಾಮಕೃಷ್ಣ ಮರಾಟಿ, ಪಿಲಿಕುಳ ಔಷಧಿವನದ ಮೇಲ್ವಿಚಾರಕರಾದ ಶ್ರೀ ಉದಯಕುಮಾರ್ ಶೆಟ್ಟಿ, ಅಕ್ವೇರಿಯಂ ಮೇಲ್ವಿಚಾರಕ ಶ್ರೀ ನಾಗೇಶ್ ಕುಲಾಲ, ಕ್ಷೇತ್ರ ಸಹಾಯಕ ಶ್ರೀ ರವಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯವರು ಮೀನು ಮರಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.


Fruit mela - 16,17 June , 2018


ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಶ್ಲಾಘನೀಯ – ಡಾ. ಕೆ. ವಿ. ರಾವ್

ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ‘ಚೇತನ’ ಎಂಬ ಕಾರ್ಯಕ್ರಮವನ್ನು ಸ್ಯಾಮ್‍ಸಂಗ್ ಮತ್ತು ಇನ್ಫೊಸಿಸ್ ಫೌಂಡೇಶನ್ ಜತೆಗೂಡಿ ನಡೆಸುತ್ತಿದೆ. ಇದರ ಉದ್ದೇಶ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆಗಳನ್ನು ನೀಡುವುದು. ಒಂದು ವಾರದ ಅವಧಿಯ ಈ ಶಿಬಿರದಲ್ಲಿ ಅವರಿಗೆ ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಪರಿಚಯ, ಇರುವ ಅವಕಾಶಗಳು, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮಗೆ ಬೇಕಾದ ಕ್ಷೇತ್ರಗಳನ್ನು ಆರಿಸುವಲ್ಲಿ ಸಹಾಯ, ವಿವಿಧ ಕ್ಷೇತ್ರಗಳ ತಜ್ಞರೊಡನೆ ಸಂವಾದ, ಮನೋರಂಜನೆ, ಯೋಗ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುವುದು. ಈ ಬಾರಿ ಮಂಗಳೂರಿನ ಮುಡಿಪು ಇನ್ಫೊಸಿಸ್ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸುಮಾರು 400 ವಿದ್ಯಾರ್ಥಿನಿಯರು ಹಾಗೂ ಸಂಯೋಜಕರು ಭಾಗವಹಿಸುತ್ತಿದ್ದಾರೆ.

ಇದರ ಅಂಗವಾಗಿ ಪಿಲಿಕುಳದ ಭೇಟಿಗೆ ಐ.ಸಿ.ಟಿ. ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೌಲಿಶ್ರೀ, ಮಂಗಳೂರು ಕ್ಯಾಂಪ್ ಸಂಯೋಜಕರಾದ ಡಾ. ಶಂಶಾಕ್ ಶೆಟ್ಟಿ, ಇಲಾಖೆಯ ಶ್ರೀ ಪ್ರಭು ರಘುನಾಥ್, ಶ್ರೀ ಮೋಹನ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ದಿನಾಂಕ 30.05.2018 ರಂದು ಯೋಜಿತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ಬೆಳೆಯಲು ಅತ್ಯಂತ ಸ್ಫೂರ್ತಿದಾಯಕವಾಗಿದ್ದು, ಇದನ್ನು ರೂಪಿಸಿದ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿ, ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು. ಪಿಲಿಕುಳ ಬೆಳೆದು ಬಂದ ದಾರಿ ಮತ್ತು ಧ್ಯೇಯೋದ್ಧೇಶಗಳನ್ನು ವಿವರಿಸಿದರು. ನಂತರ ಎಲ್ಲರಿಗೆ ತಾರಾಲಯ ಪ್ರದರ್ಶನ, ವಿಜ್ಞಾನ ಕೇಂದ್ರದ ಗ್ಯಾಲರಿಗಳ ಭೇಟಿ ಮತ್ತು ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಲಾಯಿತು. ವಿದ್ಯಾರ್ಥಿನಿಯರು ತುಂಬು ಆಸಕ್ತಿಯಿಂದ ಪ್ರಾತ್ಯಕ್ಷಿಕೆಗಳಲ್ಲಿ ಹಾಗೂ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಎದ್ದು ಕಾಣುತ್ತಿತ್ತು. ನಂತರ ಜೈವಿಕ ಉದ್ಯಾನ ವನ, ಗುತ್ತು ಮನೆ, ಕರಕುಶಲ ಗ್ರಾಮ ಭೇಟಿಯನ್ನು ಸಹ ಆಯೋಜಿಸಲಾಗಿತ್ತು. ಡಾ. ಮೌಲಿಶ್ರೀ ಇತರ ಅಧಿಕಾರಿಗಳು ಪಿಲಿಕುಳದ ಸಂದರ್ಶನ ಬಹುವಾಗಿ ಮೆಚ್ಚಿಕೊಂಡರು.


" Workshop on Planetarium & Science Centers Architectural design and Construction" held during May 21 & 22, 2018 at PRSC


Pilikula Vasanthotsava Postponed


ಭೂಮಿಯ ಸನಿಹ ಬಂದ ಗುರು ಗ್ರಹದ ವೀಕ್ಷಣೆ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 09.05.2018 ರ ರಾತ್ರಿ ಭೂಮಿಯ ಸನಿಹ ಬಂದ ಗುರುವಿನ ವೀಕ್ಷಣೆಗೆ ವ್ಯವಸ್ಥೆಮಾಡಲಾಗಿತ್ತು. ಈ ವಿದ್ಯಮಾನವು 399 ದಿನಗಳಿಗೊಮ್ಮೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಗುರುಗ್ರಹ ಪ್ರಕಾಶಮಾನವಾಗಿ ಕಂಡುಬರುತ್ತದೆ. ವಿಜ್ಞಾನ ಕೇಂದ್ರದ ದೂರದರ್ಶಕದ ಮೂಲಕ ಗುರು ಗ್ರಹ, ಅದರ ಪಟ್ಟೆಗಳು, ಕೆಂಪು ಮಚ್ಚೆ ಹಾಗೂ ಅದರ ಉಪಗ್ರಹಗಳಾದ ಅಯೋ, ಯುರೋಪಾ, ಗೆನಿಮೀಡ್ ಮತ್ತು ಕೆಲಿಸ್ಟೋಗಳನ್ನು ವೀಕ್ಷಕರಿಗೆ ತೋರಿಸಿ ಜತೆಗೆ ಇತರ ನಕ್ಷತ್ರಗಳನ್ನು ಕೂಡ ಪರಿಚಯಸಲಾಯಿತು.

ವಿಜ್ಞಾನ ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ ವಿದ್ಯಮಾನದ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ಸಹಾಯಕ ಶ್ರೀ ಶರಣಯ್ಯ ಬರೀಗಣ್ಣಿನಿಂದ ಆಕಾಶ ಕಾಯಗಳ ವೀಕ್ಷಣೆ ಕುರಿತು ಮಾಹಿತಿ ನೀಡಿದರು. ಹವ್ಯಾಸಿ ಖಗೋಳ ಶಾಸ್ತ್ರಜ್ಞ ಶ್ರೀ ನವೀನಚಂದ್ರ, ಶ್ರೀ ಗೌರವ ಹಾಗೂ ಇತರರು ಉಪಸ್ಥಿತರಿದ್ದರು.


ಭೂಮಿಯ ಹತ್ತಿರ ಗುರು

ಸೂರ್ಯನ ಸುತ್ತ ಸುತ್ತುತ್ತಿರುವ ಭೂಮಿ ಮತ್ತು ಹೊರಗಿನ ಪಥದಲ್ಲಿ ಸುತ್ತುತ್ತಿರುವ ಗುರು ಗ್ರಹ ಮೇ 9 ರಂದು ಒಂದೇ ಸಾಲಿನಲ್ಲಿ ಬರಲಿದ್ದು, ಅಂದು ಗುರು ಗ್ರಹವು ಭೂಮಿಗೆ ಸಮೀಪದಲ್ಲಿರುತ್ತದೆ. ಈ ಅಪರೂಪದ ವಿದ್ಯಮಾನವು 399 ದಿನಗಳಿಗೊಮ್ಮೆ ಸಂಭವಿಸಲಿದ್ದು ಅಂದು ಗುರುಗ್ರಹ ಪ್ರಕಾಶಮಾನವಾಗಿ ಕಂಡುಬರುತ್ತದೆ. ಸಾಮಾನ್ಯ ದೂರದರ್ಶಕದಿಂದ ನೋಡಿದರೂ ಅದರ ಪಟ್ಟೆಗಳು, ಕೆಂಪು ಮಚ್ಚೆ ಹಾಗೂ ಅದರ ಉಪಗ್ರಹಗಳಾದ ಅಯೋ, ಯುರೋಪಾ, ಗೆನಿಮೀಡ್ ಮತ್ತು ಕೆಲಿಸ್ಟೋ ಕಾಣಬಹುದು.

ಇಂದು ಪೂರ್ವಾಕಾಶದಲ್ಲಿ ಆಗ್ನೇಯ ದಿಕ್ಕಿನತ್ತ ತುಲಾ ರಾಶಿಯಲ್ಲಿ ಅಂದಾಜು 350 ಕೋನದ ಎತ್ತರದಲ್ಲಿ ಸುಮಾರು ರಾತ್ರಿ 9:00 ಗಂಟೆಗೆ ಕಾಣಸಿಗುವ ಗುರು ಗ್ರಹವು ನಂತರ ಮಧ್ಯರಾತ್ರಿಯಲ್ಲಿ ಪ್ರಕಾಶಮಾನವಾಗಿ ನಕ್ಷತ್ರದಂತೆ ಹೊಳೆಯುವುದನ್ನು ಕಾಣಬಹುದು. ಆಸಕ್ತರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕದ ಮೂಲಕ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು.


Summer Camp 2018


Pilikula Bisu Parba held on 14-4-2018


Inauguration of Swami Vivekananda Planetarium


National Science Day - 2018

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮತ್ತು ಪಿಲಿಕುಳ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 28.02.2018ರಂದು ನಡೆಯಿತು. ಈ ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಶ್ರೀ ಬಿ.ಆರ್. ಗುರುಪ್ರಸಾದ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬೆಂಗಳೂರು ಇವರು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಉತ್ತಮವಾದ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಜನರಿಗೆ ಅರಿವು ನೀಡುವ ಹಾಗೂ ದಿನನಿತ್ಯದ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವು ಮುಂದಿನ ಮನುಕುಲಕ್ಕೆ ದೊರೆಯುವಂತಾಗಬೇಕು ಹಾಗೂ ಅವುಗಳನ್ನು ರಕ್ಷಣೆ ಮಾಡುವುದು, ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಮಂಗಳೂರಿನ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಪ್ರಥಮ ದರ್ಜೆ ಕಾಲೇಜು, ಪ್ರೌಢ ಶಾಲೆಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಶ್ರೀ ವಿ. ಪ್ರಸನ್ನ ಸದಸ್ಯ ಕಾರ್ಯದರ್ಶಿ, ಇವರು ಭಾರತದಲ್ಲಿ ಮೂಲ ವಿಜ್ಞಾನದಲ್ಲಿ ಸಂಶೋಧನೆಗಳು ನದೆಯುತ್ತಿರಬೇಕು ಅದಕ್ಕೆ ವಿದ್ಯಾರ್ಥಿಗಳು ಒತ್ತು ನೀಡಬೇಕೆಂದು ಕರೆಕೊಟ್ಟರು. ಡಾ. ಕೆ. ವಿ. ರಾವ್, ನಿರ್ದೇಶಕರು, ಪಿಲಿಕುಳ ವಿಜ್ಞಾನ ಕೇಂದ್ರ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಚಂದ್ರಶೇಖರ್ ಶೆಟ್ಟಿ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಮತ್ತು ಡಾ. ಸಿ.ಕೆ. ಮಂಜುನಾಥ, ಸಹ್ಯಾದಿ ಇಂಜಿನಿಯರಿಂಗ್ ಕಾಲೇಜು ಇವರು ಉಪಸ್ಥಿತರಿದ್ದರು. ಶ್ರೀ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶಿವರಾಮ್ ವಂದನಾರ್ಪಣೆಗೈದರು.


Lunar eclipse programme organised at  Kulashekar, Mangaluru held on 31.01.2018. About 600 people witnessed the same.


69th  Republic Day Celebration at Dr. Shivarama Karantha Pilikula Nisargadhama. Sri Prasanna V. KAS, Executive Director, flag hoisted. Dr K V Rao, Sri Chandrakanth, Sri Babu Devadiga, Sri Ramakrishna Marathi, Sri Jagannath, Sri Dayasagar and others were present.